ಯಾವ ಜನ್ಮದ ಮೈತ್ರಿಯೋ ❣️
Author: Sundari Sundari
❣️ಯಾವ ಜನ್ಮದ ಮೈತ್ರಿಯೋ❣️
ಯಾವ ಜನ್ಮದ ಮೈತ್ರಿ ಈ ಜನ್ಮದಲ್ಲಿ ಬಂದು..
ನಮ್ಮಿಬ್ಬರನು ಮತ್ತೆ ಬಂಧಿಸಿಹುದೋ..... ಕಾಣೆ
ಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು ನಮ್ಮಿಬ್ಬರನು ಮತ್ತೆ ಬಂಧಿಸಿಹುದೋ.....ಕಾಣೆ
ಯಾವ ಜನ್ಮದ ಮೈತ್ರಿ... ಈ
ಎಲ್ಲಿದ್ದರೇನಂತೆ ನಿನ್ನೊಳಿಯದೆ ಮಾಣೆ...
ಎಲ್ಲಿದ್ದರೇನಂತೆ ನಿನ್ನೊಳಿಯದೆ ಮಾಣೆ......
ಗುರುದೇವನಾನೆ! ಓ ನನ್ನ ನೆಚ್ಚಿನ ಬಂಧು....
ಯಾವ ಜನ್ಮದ ಮೈತ್ರಿ,,. ಈ.....
ವಿಶ್ವ ಜೀವನವೊಂದು ಪಾರವಿಲ್ಲದ ಸಿಂಧು....
ವಿಶ್ವ ಜೀವನವೊಂದು ಪಾರವಿಲ್ಲದ ಸಿಂಧು....
ಮೇಲೆ ತೆರೆನೊರೆ ಎದ್ದು ಭೋರ್ಗರೆಯುತಿರೆ
ರೇಗಿ....
ಮೇಲೆ ತೆರೆನೊರೆ ಎದ್ದು ಭೋರ್ಗರೆಯುತಿರೆ ರೇಗಿ
ಅಂತರಾಳದಲ್ಲಿ ಗುಪ್ತಗಾಮಿನಿಯಾಗಿ.......... ಹೃದಯಗಳು ನಲಿಯುತಿದೆ ಪ್ರೇಮ ತೀರ್ಥದಿಮಿಂದು.......
ಯಾವ ಜನ್ಮದ ಮೈತ್ರಿ....ಈ...
ಅದರರ್ಥಗಿರ್ಥಗಳು ಸೃಷ್ಟಿಕರ್ತನಿಗಿರಲಿ
ವ್ಯರ್ಥ ಜಿಜ್ಞಾಸೆಯಲಿ ಕಾಲಹರಣವದೇಕೆ.... ಬಾರಯ್ಯ ಮಮ ಬಂಧು
ಜೀವನಪಥದೊಳಾವು ಬಾರಯ್ಯ ಮಮ ಬಂಧು..
. ಒಂದಾಗಿ ಮುಂದುವರೆಯುವ....
ಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು
ನಮ್ಮಿಬ್ಬರನು ಮತ್ತೆ ಬಂಧಿಸಿಹುದೋ..ಕಾಣೆ
ಯಾವ ಜನ್ಮದ........ಮೈತ್ರಿ.
ವಾವ್ ಎಷ್ಟು ಅದ್ಭುತವಾದ. ಅರ್ಥಗರ್ಭಿತವಾದ ಸಾಲುಗಳನ್ನು ಬರೆದಿದ್ದಾರೆ ರಾಷ್ಟ್ರಕವಿ ಕುವೆಂಪುರವರು.......
ಓದುತ್ತ ಓದುತ್ತ ಮೈಮರೆತ ಅನುಭವ.
ಅಕ್ಷರಗಳನ್ನು ಪೋಣಿಸುತ್ತಾ ಹೋದರೆ ಪದಗಳು ಪದಗಳನ್ನು ಪೋಣಿಸುತ್ತಾ ಹೋದರೆ ವಾಕ್ಯಗಳು...
ಹಾಗೆಯೇ ಜೀವನದ ಘಟನೆಗಳನ್ನು ಪೋಣಿಸುತ್ತ ಹೋದರೆ ನಮ್ಮ ಪಾಲಿಗೆ ಅದುಇತಿಹಾಸ ವೆನಿಸುತ್ತದೆ
ಹಾಗೆಯೇ ನನ್ನ ಜೀವನವು ಕೂಡ.......
ಒಂದು ಅರ್ಥಗರ್ಭಿತವಾದ ಬಿಳಿಹಾಳೆಯಲ್ಲಿ ನನ್ನ ಜೀವನದ ಬರಹಗಳ ಗೀಚುತ್ತಿರುವೆ. ಹಾಳೆಯ ಬಣ್ಣ ಬಿಳಿಯಾದರೂ ಅದರಲ್ಲಿ ಗೀಚಿದ ಮಾಹಿತಿ ಕೆಸರಾಗಿರಬಾರದು ಎನ್ನುವ ಜಾಯಮಾನದ ಹುಡುಗಿ... .
ನನ್ನ ಲೈಫಲ್ಲಿ ನಾನೇ ಹೀರೋ ನಾನೇ ಹೀರೋಯಿನ್ ನಾನೇ ವಿಲನ್ ಅನ್ನುವ ತರಹ ಬದುಕುತ್ತಿದ್ದೆ...... ಸ್ವಲ್ಪ ಕೊಬ್ಬು ಜಾಸ್ತಿ.. ಆದರೆ ಮನಸ್ಸು ತುಂಬಾ ಮೃದು .,.... ಜೀವನದ ಬಗ್ಗೆ ತುಂಬಾ ಕನಸಿದೆ ಆದರೆ ಕನಸೇ ಜೀವನವೆಂದು ನಾನು ಹೇಳುತ್ತಿಲ್ಲ, ಒಮ್ಮೊಮ್ಮೆ ವಿಧಿಯಾಟಕ್ಕೆ ಕನಸೇ ಛಿದ್ರಛಿದ್ರವಾಗಬಹುದು. ಆದರೆ ನಾನು ಕನಸು ಕಾಣುವುದನ್ನು ಇದುವರೆಗೂ ಬಿಟ್ಟಿಲ್ಲ....... ನನ್ನ ಕನಸು ಫ್ಯಾಶನ್ ಡಿಸೈನರ್ ಆಗುವುದು.... ಆಗ್ತಿನೋ ಇಲ್ವೋ ಗೊತ್ತಿಲ್ಲ ಆದ್ರೆ ಪ್ರಯತ್ನವಂತೂ ಪಡುತ್ತಿದ್ದೇನೆ. ಇಷ್ಟೆಲ್ಲಾ ಭಾಷಣ ಬಿಗಿತಾಳಲ್ಲ.... ಯಾರಪ್ಪ ಇವ್ಳು......? ಅಂತ ಯೋಚನೆ ಮಾಡಿ ತಲೆಕೆಡಿಸಿಕೊಳ್ಳಬೇಡಿ.ನನ್ ಹೆಸ್ರು. ನಂದಿನಿ... ಎಲ್ರೂ ನನ್ನ ಪ್ರೀತಿಯಿಂದ ನಂದು ನಂದು ಅಂತ ಕರೀತಾರೆ. ನಾನು ಅಪ್ಪಟ ಕನ್ನಡಮ್ಮನ ಮಗಳು. ಅಂದ್ರೆ ಅಪ್ಪಟ ಕನ್ನಡತಿ. ನನ್ನೂರು ಶಿವನ ದುರ್ಗ...... ಬೆಟ್ಟ ಕಾಡು ಅರಣ್ಯಗಳಿಂದ ಕೂಡಿರುವ ಸುಂದರ ತಾಣ. ಹಾಗೆಯೇ ಕ್ರೂರಮೃಗಗಳಿಂದ ಕೂಡಿರುವ ಭಯಾನಕ ತಾಣವೂ ಹೌದು. ಇಂತಹ ಕಾಡಿನ ದಂಡೆಯಲ್ಲಿ ನಮ್ಮದೊಂದು ಪುಟ್ಟ ಗ್ರಾಮ ಮೊದಲೇ ಹೇಳಿದ ಹಾಗೆ ಶಿವನ ದುರ್ಗ ಅನ್ನೋದು ಅದರ ಹೆಸರು.... ಇಲ್ಲಿನ ಆರಾಧ್ಯ ದೈವ ಸಾಕ್ಷಾತ್ ಪರಶಿವನೇ ಆಗಿದ್ದಾನೆ. ಕಾಲಕಾಲಕ್ಕೆ ಮಳೆ ಬೆಳೆ ಯಾಗುವುದರಿಂದ ಇಲ್ಲಿನ ಜನ್ರು ಹೆಚ್ಚಾಗಿ ಕೃಷಿಯನ್ನೇ ಅವಲಂಬಿಸಿದ್ದಾರೆ. ಆದ್ರೆ ನಾನು ಚಿಕ್ಕವಳಿದ್ದಾಗ.... ಈ ಊರಿನಲ್ಲಿ ಚಿರತೆಗಳ ಕಾಟ ಹೆಚ್ಚಾಗಿತ್ತು. ಹಗಲು-ರಾತ್ರಿಯೆನ್ನದೆ ಮನೆ ಮನೆಗಳಿಗೆ ನುಗ್ಗಿ ಜನರನ್ನು ಹಸುಗೂಸುಗಳನ್ನು ದನ ಮೇಕೆಮುಂತಾದ ಪ್ರಾಣಿಗಳನ್ನು ಕೊಂದು ಅವುಗಳ ಮಾಂಸವನ್ನು ತಿಂದು ತನ್ನ ಹಸಿವನ್ನು ನೀಗಿಸಿಕೊಳ್ಳುತಿತ್ತು. ಹೀಗೆಯೇ ಬೇಟೆಯಾಡಿದ ಚಿರತೆಗೆ ಮನುಷ್ಯ ಮಾಂಸದ ರುಚಿ ತುಂಬಾ ಹಿಡಿಸಿತು. ಹಾಗಾಗಿ ಪದೇ ಪದೇ ಹಳ್ಳಿಗೆ ಬಂದು ಸಿಕ್ಕ ಸಿಕ್ಕ ಜನರನ್ನು ಕೊಂದು ತನ್ನ ಹಸಿವು ನೀಗಿಸಿಕೊಳ್ಳುತ್ತಿತ್ತು.....ಇದರಿಂದ ಹೆಚ್ಚಾಗಿ ನಮ್ಮ ಊರಿನ ಜನ ಸಂಖ್ಯೆ ಕಡಿಮೆಯಾಯಿತು...... ಇನ್ನು ಕೆಲವರು ಪ್ರಾಣಭಯದಿಂದ ಊರನ್ನೆ ಬಿಟ್ಟು ಹೋದರು.... ಕ್ರೂರ ಮೃಗಗಳಿಂದ ತುಂಬಿರುವ ಕಾಡನ್ನು ಪ್ರವೇಶಿಸಿ ಇನ್ನೊಂದು ಹಳ್ಳಿಗೆ ಹೋಗುವುದು ಅಷ್ಟೊಂದು ಸುಲಭದ ಕೆಲಸವೇನಲ್ಲ ಹಳ್ಳಿ ಬಿಟ್ಟುಹೋದ ಅರ್ಧಕರ್ಧ ಜನ ಚಿರತೆಯ ಹಾಗೂ ಇತರೆ ಕ್ರೂರಮೃಗಗಳ ಬಾಯಿಗೆ ಆಹಾರವಾಗಿದ್ದರು. ಇನ್ನು ಕೆಲವು ಬುದ್ಧಿವಂತರು ಅದರ ಕಣ್ಣಿಗೆ ಮಣ್ಣೆರೆಚಿ ಬದುಕಿದೆಯೋ ಬಡಜೀವ ಎಂದುಕೊಳ್ಳುತ್ತಾ ಎಸ್ಕೇಪ್ ಆಗಿದ್ದರು. ಆಗ ನನಗಿನ್ನೂ ನಾಲ್ಕು ವರ್ಷ... ಸ್ವಲ್ಪ ಹುಡುಗಾಟದ ಬುದ್ಧಿ...... ಈಗೆಲ್ಲ ತಂದೆ-ತಾಯಿಯರುಊಟ ಮಾಡಿಲ್ಲ ಅಂದ್ರೆ. ಗುಮ್ಮ ಬರ್ತಾನೆ ಅಂತ ಹೇಲೋರು l ಆದ್ರೆ ನನಗೆ ನನ್ನ ತಂದೆ ತಾಯಿ ಊಟ ಮಾಡಿಲ್ಲ ಅಂದ್ರೆ ಚಿರತೆ ಬರ್ತದೆ, ಮನೆಯಿಂದ ಹೊರಗೆ ಹೋದರೆ ಚಿರತೆ ಬಂದು ಎತ್ತಿಕೊಂಡು ಹೋಗ್ತದೆ ಅಂತ ಹೆದರಿಸೋರು. ನನಗೆ ನಾಲ್ಕು ವರ್ಷ ಆದ್ರೂ ನಾನು ತುಂಬಾ ಬುದ್ಧಿವಂತೆ ಅನ್ನುವ ನಂಬಿಕೆ ನನಗಿತ್ತು......., ಹಾಗೆಯೇ ಅಪ್ಪ ಕಳಿಸಿಕೊಟ್ಟ ಸಂಸ್ಕಾರ ನನ್ನ ಜೊತೆ ಇತ್ತು ಅಮ್ಮ ಎಂಬ ಪ್ರೀತಿಯ ಶಕ್ತಿ ಇತ್ತು ಇನ್ನೇನು ಬೇಕು ಜೀವನದಲ್ಲಿ..... ಅಲ್ವಾ???
ನಾನಂತೂ ಚೋಟುದ್ದ ಮೆಣಸಿನಕಾಯಿ ಆದರೆ ಚಿಕ್ಕ ಮೆಣಸಿನಕಾಯಿಗಿಂತ ದೊಡ್ಡ ಮೆಣಸಿನಕಾಯಿ ಖಾರವಾಗಿಯೇ ಇರುತ್ತದೆ..... ಹಾಗೆಯೇ ನಾನು ಕೂಡ ಗಾತ್ರ ಚಿಕ್ಕದಾದರೂ ಭಾಷಣ ಬಿಗಿಯುವ ದನ್ನು ಚೆನ್ನಾಗಿಯೇ ಕಲಿತಿದ್ದೇನೆ... ಅವರ ಈ ಮಾತಿಗೆ ನನ್ನ ಉತ್ತರ ಒಂದೇ
ಜೀವನ ಅನ್ನೋದು ರೈಲು ಬಂಡಿ ಯತರ......
ಭೂಮಿಯ ವರೆಗೆ ಡ್ರಾಪ್ ಮಾಡಿ. ಹೋಗುವಾಗ ಸ್ವರ್ಗ ಮತ್ತು ನರಕ ಇಂದು ಎರಡಾಗಿ ವಿಭಜನೆಯಾಗುತ್ತದೆ.ಯಾರ್ಯಾರ ಆಯಸ್ಸು ಮುಗಿದು ಹೋಗಿರುತ್ತದೋ ಅವರನ್ನು ಕರೆದುಕೊಂಡು ಹೋಗಲನುವಾಗುತ್ತದೆ. ಕೆಲವರಿಗೆ ಸ್ವರ್ಗದಲ್ಲಿ ಜಾಗ ಸಿಗುತ್ತದೆ. ಇನ್ನು ಕೆಲವರಿಗೆ ನರಕದಲ್ಲಿ. ಇಷ್ಟೇ ವ್ಯತ್ಯಾಸ..... ಜೀವನ ಅನ್ನೋದು ತುಂಬಾ ಸರಳ ಅಂತ ನನ್ನ ನಂಬಿಕೆ. ಆದರೆ ಜೀವನ ಅನ್ನುವುದು ಸವಾಲುಗಳ ಸರಮಾಲೆ..... ಒಬ್ಬರಿಗಿಂತ ಒಬ್ಬರು ಪ್ರಬಲವಾದ ಸ್ಪರ್ಧಿಗಳು... ಒಟ್ಟಾರೆ ಹೇಳಬೇಕೆಂದರೆ ಜೀವನ ಅನ್ನುವುದೇ ಪ್ರಬುದ್ಧವಾದ ಸ್ಪರ್ಧೆ............ ಆ ಸ್ಪರ್ಧೆಯಲ್ಲಿ ಎಲ್ಲರೂ ಪಾಲುದಾರರೆ... ಗೆದ್ದವರು ಜೊತೆ ಸೋತವರು ಇತಿಹಾಸ ಪುಟ ಸೇರುತ್ತಾರೆ.... ಆದರೆ ಸ್ಪರ್ಧೆ ನೋಡುತ್ತಿರುವವರು ಮಾತ್ರ ಯಾವ ಪುಟವನ್ನು ಸೇರುವುದಿಲ್ಲ..... ಹೋರಾಟವೇ ಜೀವನ ಹೋರಾಡುವುದು ಅದು ನನ್ನ ಧರ್ಮ..... ಅಂತ ಹೇಳುತ್ತಿದ್ದೆ. ಅಪ್ಪನಿಗೊಂದು ಒಂದು ರೀತಿಯಲ್ಲಿ ನನ್ನ ಮೇಲೆ ಹೆಮ್ಮೆ...,... ಹೀಗೆಯೇ ಒಂದು ವಾರ ಕಳೆಯಿತು. ಅಂದು ನಾನು ಅಂಗಳದಲ್ಲಿ ಒಬ್ಬಳೇ ಆಟವಾಡುತ್ತಾ ಕುಳಿತಿದ್ದೆ ಅಪ್ಪ ಗದ್ದೆ ಕೆಲಸಕ್ಕೆ ಹೋಗಿದ್ದರು... ಇನ್ನು ಕೆಲವರು ಗದ್ದೆ ಕೆಲಸ ಬೇಡ ಯಾವ ಕೆಲಸ ಬೇಡ.. ಮನೆಯಲ್ಲಿ ಕುಳಿತು ಕೊಳ್ಳೋಣ... ಇನ್ನು ಚಿರತೆಗೆ ಆಹಾರವಾಗುವುದು ಬೇಡ ಎಂದುಕೊಂಡು.. ಮನೆಯಲ್ಲೇ ಕದ ಮುಚ್ಚಿ ಕುಳಿತಿದ್ದರು..
ಆದರೆ ನನ್ನ ತಂದೆ ತುಂಬಾ ಧೈರ್ಯವಂತರು... ಹಾಗೋ ಹೀಗೋ.. ಗದ್ದೆ ಕೆಲಸಕ್ಕೆ ಹೋಗಿದ್ದರು.... ಒಬ್ಬರೇ ಹೋಗಿರಲಿಲ್ಲ ಅಪ್ಪ ಹೋಗುವಾಗ ಧೈರ್ಯಕ್ಕೆ ಅಂತ ಒಂದು ಕೋವಿ ಹಿಡಿದುಕೊಂಡು ಹೋಗಿದ್ದರು. ನಾನಂತೂ ಪುಟ್ಟ ಹುಡುಗಿ ಆಟಕ್ಕೆ ಯಾರೂ ಇರಲಿಲ್ಲ ಹೀಗೆಯೇ ಒಬ್ಬಳೇ ಆಟವಾಡುತ್ತಿರುವಾಗ... ನಮ್ಮ ಊರಿನ ಶತ್ರು ಎಂಬ ಬಿರುದು ಪಡೆದ ಆ ಮಹಾನುಭಾವ ಚಿರತೆಯ ಆಗಮನವಾಗಿತ್ತು... ನಾನಾವಾಗ ಪುಟ್ಟ ಪಾಪು ನನಗೇನು ಗೊತ್ತು ಇದು ಚಿರತೆ ಎಂದು ಚಿರತೆ ಎಂಬ ಹೆಸರು ಕೇಳಿದ್ದೀನಿ ಹೊರತು ಅದನ್ನು ಕಣ್ಣುತುಂಬಿ ನೋಡಲಿಲ್ಲ. ಎಲ್ಲರಿಗೂ ಚಿರತೆ ಬೆಕ್ಕಿನ ಅಕ್ಕನೋ ತಂಗಿಯು ಎಂಬಂತೆ ಕಾಣಿಸಿದರೆ ನನಗೆ ಮಾತ್ರ ವಿಚಿತ್ರವಾಗಿ ಶ್ವಾನದ ರೀತಿಯಲ್ಲಿ ಕಾಣಿತು. ಶ್ವಾನ ವೆಂದರೆ ಗೊತ್ತಿರಬೇಕಲ್ಲ ನಾಯಿ ಎನ್ನುವುದು ಅದರ ಅರ್ಥ...ನಾನು ಮತ್ತು ಶ್ವಾನ ಆಜನ್ಮ ಶತ್ರು ಎಂಬಂತೆ ನನಗೆ ಶ್ವಾನವನ್ನು ಕಂಡರೆ ಆಗುತ್ತಿರಲಿಲ್ಲ.... ನಿಮ್ಮ ಪ್ರಶ್ನೆ ಯಾಕೆ?ಎಂದಿರಬಹುದು. ಕಾರಣ ಇಷ್ಟೇ ನಾನು ಸಣ್ಣವಲಿದ್ದಾಗ ಒಂದ ಶ್ವಾನ ನನಗೆ ಕಚ್ಚಿತ್ತು. ಅದರ ಸಂಕಟದಿಂದ ನಾನು ಪಟ್ಟ ಪಾಡು ಅಷ್ಟಿಷ್ಟಲ್ಲ.... ಹಾಗಾಗಿ ನನಗೆ ಮೊದಲೇ ಶ್ವಾನದ ಮೇಲೆ ಎಲ್ಲಿಲ್ಲದ ಕೋಪ..... ಈ ಚಿರತೆ ಮತ್ತು ಶ್ವಾನದ ವ್ಯತ್ಯಾಸ ತಿಳಿಯದೇ ಒಂದು ಚಿಕ್ಕ ಬೆತ್ತವನ್ನು ಹಿಡಿದು ಕೊಂಡು ಮನದಲ್ಲೇ ಬಯ್ಯುತ್ತಾ ಅದರ ಮುಂದೆ ಮುಂದೆ ಹೋದೆ.... ಅದು ಇದೆ ಕ್ಷಣಕ್ಕೆ ಕಾಯುತ್ತಿದೆ ಎನ್ನುವಂತೆ ನನ್ನ ಮೇಲೆ ಹಾರಿತು. ಅದು ಹಾರಿದ ರಭಸಕ್ಕೆ ನಾನು ಭಯಪಟ್ಟು ಕಣ್ಣನು ಮುಚ್ಚಿ ಕೆಳಗೆ ಬಿದ್ದೆ. ಆಗಲೇ ಡಮಾರ್ ಎನ್ನುವ ಶಬ್ದ ಕೇಳಿತ್ತು. ಮುಚ್ಚಿದ್ದ ಕಣ್ಣನ್ನು ತೆರೆದು ನೋಡಿದೆ ಗದ್ದೆಗೆ ಹೋಗಿದ್ದ ಅಪ್ಪ ಬರುವ ಸಮಯದಲ್ಲಿ ಈ ಚಿರತೆ ನನ್ನ ಮೇಲೆ ಆಕ್ರಮಣ ಮಾಡಿದ್ದರಿಂದ ಅಪ್ಪ ತನ್ನ ಕೋವಿಯಿಂದ ಗುಂಡನ್ನು ಹಾರಿಸಿಯೇ ಬಿಟ್ಟಿದ್ದರು... ಚಿರತೆ ಸತ್ತು ನೆಲದ ಮೇಲೆ ಬಿದ್ದಿತ್ತು..... ನಾನು ಅಪ್ಪನ ಬಳಿ ಖುಷಿಯಿಂದ ಓದಿ ಅಪ್ಪಿಕೊಂಡು... ಅಪ್ಪ ಈ ನಾಯಿಗೆ ಜಂಪಿಂಗ್ ಹೇಳಿಕೊಟ್ಟವರು ಯಾರು? ಎಂದು ನನ್ನ ಮನದ ಪ್ರಶ್ನೆಯನ್ನು ಕೇಳಿದೆ. ಅಪ್ಪ ಓಡಿ ಬಂದು ನನ್ನ ಅಪ್ಪಿಕೊಂಡು ಮಗಳೇ ನಿನಗೇನು ಆಗಲಿಲ್ಲವಲ್ಲ? ಎಂದು ಕರುಣಾಜನಕವಾಗಿ ಕೇಳಿದ್ರು.. ಅವರ ಕಣ್ಣಲ್ಲಿ ಧಾರಾಕಾರವಾಗಿ ಸುರಿಯುತ್ತಿದ್ದ ಕಣ್ಣೀರು.. ಅವರಿಗೆ ನನ್ನ ಮೇಲೆ ಎಷ್ಟು ಪ್ರೀತಿ ಇದೆ ಎನ್ನುವುದನ್ನು ತೋರಿಸಿಕೊಟ್ಟಿದ್ದು.... ಆದರೆ ನಾನು ಮುಗ್ಧಳಂತೆ. ಆ ಶ್ವಾನಕ್ಕೆಷ್ಟು ಧೈರ್ಯ ನನ್ನ ಮೇಲೆ ಆಕ್ರಮಣ ಮಾಡುತ್ತದೆ... ಒಳ್ಳೆ ಕೆಲಸ ಮಾಡಿದ್ದೀರಅಪ್ಪ ಎಂದು ಅಪ್ಪನನ್ನು ಹೊಗಳಿದೆ. ಅಪ್ಪ ನಗುತ್ತಾ ಲೋ ಕಂದ.. ಅದು ಶ್ವಾನ ಅಲ್ಲ ಕಣೋ... ನಾನು ಮೊನ್ನೆ ಹೆದರಿಸಿದೆ ಅಲ್ವಾ ಅದೇ ಚಿರತೆಯಂಥ ಆ ಪ್ರಾಣಿ ಇದು ಕನೋ. ಎಂದು ತಲೆ ನೇವರಿಸಿ ಹೇಳಿದರು....
ತಂದೆ ಎಂಬ ಧೈರ್ಯ ಇರುವಾಗ ಮೂರು ಲೋಕವನ್ನು ಗೆಲ್ಲುವ ಛಲವಿದೆ.
ಎದುರಿಸುವ ಧೈರ್ಯವಿದೆ.......
ನಾವು ಹೇಳಿದ್ದನೆಲ್ಲ ತಂದು ಕೊಡುವವರು...
ಪ್ರೀತಿಯ ಒಡಲಲಿ ಮಮತೆಯ ಉಣಿಸುವವರು..
ತಾಯಿಯ ನಂತರ ಇವರದೇ ಮೊದಲ ಹೆಸರು.....
ಕಾಳಜಿಗೆಇವರ ಬಿಟ್ಟರೆ ಬೇರೆ ಯಾರು ಉದಾಹರಣೆ....
ಲೋಕದಲ್ಲಿ ಮಾಯೆಯೇ ತುಂಬಿರಲಿ..
ನನ್ನೊಳು ಕ್ರೋಧವೇ ತುಂಬಿರಲಿ....
ಅವರ ಒಂದು ಸಾಂತ್ವನವೇ ಸಾಕು ನಾ ಎಲ್ಲ ಮರೆಯಲು.....
ಒಂದು ಪುಟ್ಟ ಹೃದಯಕ್ಕೆ ಪ್ರೀತಿಯೆಂಬ ಚುಕ್ಕಾಣಿ ಇರಬೇಕು ಹೊರತು ದ್ವೇಷವಲ್ಲ
ದೇವರು ಎಂದರೆ ಪ್ರೀತಿ.....
ಜಗದ ಕಣಕಣದಲ್ಲಿ ತುಂಬಿಹುದು ಪ್ರೀತಿ.....
ಆದರೆ ಇದುವರೆಗೂ ಮನುಜನಿಗೆ ತಿಳಿದಿಲ್ಲ ಆ ಪ್ರೀತಿಯ ರೀತಿ.....
ಸಂಬಂಧಗಳ ಬೆಸೆತವಿರಬಹುದು ಅನುಬಂಧಗಳ ಬಂಧವಿರಬಹುದು
ಅಪ್ಪ ನೀನಿರೆ ನನ್ನ ಜೊತೆ....
ಗೆಲ್ಲುವೆ ಈ ಲೋಕವನ್ನೇ...
ನೀ ಇರದ ಬಾಳು
ಹೇಗೆ ವರ್ಣಿಸಲಿ ನಾನು ಹೇಳು.,
..
ಬಾಳ ಹಣತೆಯಲಿ ಬೆಳಗಿದ ನಂದಾದೀಪ ನೀನು.......
ನನಗೆ ಮದುವೆಯೆಂಬ ಮಂಗಳಸೂತ್ರ ಬಿದ್ದ ಕೂಡಲೇ...
ನಿನಗೆ ನಾನು ದೂರ ವಾದಂತಹ ಅನುಭವ
ಆದರೆ ನಾನೆಂದು ನಿನ್ನೊಳಗಿರುವ ಆತ್ಮವಾಗಿಹೇ
ಜಗದೊಡೆಯನೇ ನನಗೆ ನೀನಾಗಿರುವಾಗ
..
ಜಗದೊಡೆಯನಾ ಮರೆಯುವೆನೆ... ನಾನು
ಜೀವನವೆಂಬ ಸ್ಪರ್ಧಾ ಲೋಕದಲ್ಲಿ ಯಾರು ದೊರೆತರು ನಿನ್ನಷ್ಟು ಪ್ರೀತಿ ನೀಡುವ ಹೃದಯ ಯಾವುದು ಇಲ್ಲ.....
ಕಣ್ಣಿಗೆ ಕಾಣದ ದೇವರನ್ನು ಹೇಗೆ ನಂಬುತ್ತೇವೋ,.
ಹಾಗೆಯೇ ಕಣ್ಣಿಗೆ ಕಾಣುವ ದೇವರನ್ನು ಎಂದೆಂದೂ ಪ್ರೀತಿಸಬೇಕು.....
ಯಾರನ್ನು ಮರೆತರು ನಿನ್ನನ್ನು ಮಾತ್ರ ಮರೆಯಲಾರೆ.....
ಪ್ರಕೃತಿಯ ಕಣಕಣದಲ್ಲೂ ಪ್ರೀತಿಯ ಛಾಯೆ ಇರುವಾಗ...
.. Totally dad is my hero😍.
ತಂದೆ ಸಣ್ಣವರಿಂದಲೂ ನಮ್ಮನ್ನು
ಆಡಿಸಿ ಬೆಳೆಸಿದ ಕೈ.... ನನ್ನ ಒಂದು ಕಣ್ಣೀರಿಗೂ ಜೀವವನ್ನೇ ನೀಡುವ ದೈವ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅದು ಬಿಡಿ ಈಗ ಕಥೆಗೆ ಬರೋಣ..... ಅವತ್ತು ಅಪ್ಪ ಹೇಳಿದ್ರಲ್ವಾ ಅದು ಶ್ವಾನ ವಲ್ಲ ಚಿರತೆ ಎಂದು. ಆವಾಗಲೇ ನನಗೆ ಗೊತ್ತಾಗಿದ್ದು ಚಿರತೆ ಮತ್ತು ಶ್ವಾನದ ವ್ಯತ್ಯಾಸ..... ಹಾಗಾಗಿ ಅಂದಿನಿಂದ ನಮ್ಮ ಊರಿನಲ್ಲಿ ಕೆಲವರು ಪರಿಣಿತರು ಚಿರತೆಯನ್ನು ಕೋವಿಯಿಂದ ಹೊಡೆದು ಸಾಗಿಸುತ್ತಿದ್ದರು.. ಹಾಗೆಯೇ ಕ್ರೂರಮೃಗಗಳೆಲ್ಲವನ್ನೂ ಗುಂಡುಹಾರಿಸಿ ಕೊಂದು ಬಿಟ್ಟರು,.... ಇದು ನಿಜವಾಗಿ ಅಪರಾಧವಾಗಿದ್ದರೂ... ಅವರು ತಮ್ಮ ಜೀವವನ್ನು ಉಳಿಸಿಕೊಳ್ಳಲು ಮಾಡಿದಂತಹ ಕೆಲಸವಾಗಿತ್ತು.. ಹಾಗಾಗಿ ಬರುಬರುತ್ತಾ ನಮ್ಮ ಊರಿನಲ್ಲಿ ಚಿರತೆಗಳ ಸಂತತಿ ನಾಶವಾಗುತ್ತಾ ಹೋಯಿತು....
ಈಗ ನಮ್ಮ ಊರಿನಲ್ಲಿ ಯಾರು ಯಾವ ಭಯವಿಲ್ಲದೇ ಮನೆಯಿಂದ ಹೊರ ಹೋಗುತ್ತಿದ್ದರು.. ಹಾಗೆ ಪಕ್ಕದ ಊರಿಗೂ ಕಾಡಿನ ದಾರಿಯಿಂದ ಪ್ರಯಾಣಿಸುತ್ತಿದ್ದರು... ಈಗ. ಅಷ್ಟೇನೂ ತೊಂದರೆ ಇರದ ಕಾರಣದಿಂದ... ಎಲ್ಲರೂ ಸಂತೋಷವಾಗಿದ್ದೇವೆ.... ನನ್ನ ತಂದೆಗೆ ಒಂದೇ ಒಂದು ಆಸೆ.. ನನ್ನನ್ನು ಸರಕಾರಿ ಶಾಲೆಯಲ್ಲಿ ಓದಿಸಿ ಒಳ್ಳೆಯ ವಿದ್ಯಾವಂತನಾಗಿ ಮಾಡಬೇಕು ಎಂದು.... ಆದರೇನು ಮಾಡುವುದು.. ಅದು ಅಸಾಧ್ಯವಾದಂತಹ ಮಾತಾಗಿತ್ತು... ಯಾಕೆಂದರೆ ನಮ್ಮ ಊರಿನಲ್ಲಿ ಇರುವ ಒಂದು ಪದ್ಧತಿಯೆಂದರೆ ಹೆಣ್ಣು ಮಕ್ಕಳಿಗೆ ಮನೆ ಕೆಲಸವಷ್ಟೇ ಸೀಮಿತ ಹಾಗಾಗಿ ಬಾಲ್ಯದಲ್ಲಿಯೇ ವಿವಾಹ ಮಾಡಿಬಿಡುತ್ತಿದ್ದರು........ ಆದರೆ ನನ್ನ ತಂದೆಗೆ ಆ ರೀತಿ-ರಿವಾಜು ಇಷ್ಟವಿರಲಿಲ್ಲ...... ಊರಿನವರನ್ನು ಎದುರು ಹಾಕಿಸಿಕೊಂಡು ನನ್ನನ್ನು ಬೆಂಗಳೂರಿನ ಪ್ರತಿಷ್ಠಿತ ಸರಕಾರಿ ಶಾಲೆಗೆ ಸೇರಿಸಿದರು. ಊರಿನ ಜನರೆಲ್ಲರೂ ನಮ್ಮ ವಿರೋಧಿಗಳಾದರು.... ಆದರೆ ಅವರಿಗೆ ನನ್ನ ತಂದೆ ಮಾಡಿದ ಸಹಾಯಗಳು ನೆನಪಿರಬೇಕಲ್ಲ..... ಈಗ ಮಾಡಿದ ಸಹಾಯ ಗಳಿಗಿಂತ ಮಾಡಿದ ತಪ್ಪನ್ನೇ ನೆನಪಿಟ್ಟುಕೊಂಡು ನಾವು ಕೊರಗುವಂತೆ ಮಾಡುವ ಜನರೇ ಹೆಚ್ಚು ಈ ಜಗದಲಿ.... ಗೊತ್ತಿಲ್ಲ ಯಾವ ರೀತಿ ರಿವಾಜು ನಿಯಮವೊ ಎಂದು.. ಮಾನವರು ಸಮಾನರು ಸ್ತ್ರೀಯರಿಗೆ ಸ್ವಾತಂತ್ರ್ಯವಿದೆ ಎನ್ನುವ ಹಲವಾರು ಮಾತುಗಳನ್ನು ಕೇಳಿದ್ದೇನೆ.... ಆದರೆ ಮಾನವರು ಸಮಾನರೇ? ಜಾತಿಭೇದ, ವರ್ಣಭೇದ, ನಾವು ಶ್ರೀಮಂತರು ನೀವು ಬಡವರು ಎನ್ನುವ ಮನೋಭಾವ..........
ಶ್ರೀಮಂತರು ಬಡವರಿಗೆ ವ್ಯತ್ಯಾಸ ಏನಿದೆ ಅವರು ಮಾಡುವ ಕೆಲಸದಲ್ಲಿ ಮಾತ್ರ ವ್ಯತ್ಯಾಸವಿರುವುದು ಅಷ್ಟೇ. ಹಾಗೆಯೇ ಕಪ್ಪಗಿರುವವರು ಎಲ್ಲ ಕೆಟ್ಟವರು ಬೆಳ್ಳಗಿರುವವರೆಲ್ಲ ಒಳ್ಳೆಯವರು ಎನ್ನುವ ಮನೋಭಾವ
ಯಪ್ಪಾದೇವರೇ ಕೇಳಿ ಕೇಳಿ ನನಗಂತೂ ಸಾಕಾಗಿ ಹೋಯಿತು...... ಇಷ್ಟು ವಿದ್ಯಾವಂತರಾದರೂ ಆ ಸಣ್ಣ ಬದಲಾವಣೆಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
. ನಾವೆಲ್ಲರೂ ಭಗವಂತನ ಸೃಷ್ಟಿ... ಭಗವಂತನಿಗೆ ನಮ್ಮ ಮೇಲೆ ಭೇದಭಾವವಿಲ್ಲ ಎಂಬುದಾದರೆ ನಮ್ಮಲ್ಲಿ ನಾವೇ ಭೇದಭಾವಗಳನ್ನು ಹುಟ್ಟಿ ಹಾಕಿಸಿಕೊಳ್ಳುವುದು ಏತಕ್ಕೆ. ಇನ್ನು ಸ್ತ್ರೀಯರಿಗೆ ಸ್ವಾತಂತ್ರ.
ಎಲ್ಲಿಯ ಸ್ವಾತಂತ್ರ್ಯ? ಬಲತ್ಕಾರ ಗಳು ಹೆಚ್ಚಾಗುತ್ತಿದೆಯೇ ಹೊರತು ಕಡಿಮೆ ಇದುವರೆಗೂ ಆಗಿಲ್ಲ ಎಂಬುದು ನನ್ನ ಅನಿಸಿಕೆ... ಈಗ ಕಥೆಗೆ ಬರುವುದಾದರೆ... ಅಪ್ಪನ ಹಟದಿಂದ ಅವರ ಛಲದಿಂದ ನನ್ನನ್ನು ಹೇಗೋ ಬೆಂಗಳೂರಿನ ಪ್ರತಿಷ್ಠಿತ ಶಾಲೆಗೆ ಸೇರಿಸಿದರು. ಈಗ ನನ್ನ ವಿದ್ಯಾಭ್ಯಾಸ ಮುಗಿಸಿ ಮನೆಗೆ ತೆರಳುತ್ತಿದ್ದೇನೆ ತುಂಬಾ ವರ್ಷಗಳಾಯಿತು ಅಪ್ಪನನ್ನು ನೋಡದೆ..... ಹಾಗಾಗಿ ಮನೆಯ ಕಡೆ ಪ್ರಯಾಣ ಬೆಳೆಸಿದ್ದೇನೆ.
ಅಪ್ಪನನ್ನು ನೋಡುವ ಕಾತುರ ಅಮ್ಮನನ್ನು ಬಿಗಿದಪ್ಪುವ ಅವಸರ. ಅಮ್ಮನ ತೋಳಿನಲ್ಲಿ ಮತ್ತೆ ಮಗುವಾಗಿರುವ ಹಂಬಳ.... ಮೊದಲೇ ಡಿಸೈಡ್ ಮಾಡಿದೆ ಒಂದು ತಿಂಗಳು ಇಲ್ಲಿದ್ದು ಅಪ್ಪನನ್ನು ಕರೆದುಕೊಂಡು ಬೆಂಗಳೂರಿಗೆ ಹೋಗಿ ಫ್ಯಾಶನ್ ಡಿಸೈನಿಂಗ್ ಕಲಿತು ನನ್ನದೇ ಆದ ಒಂದು ಕಂಪನಿಯನ್ನು ಕಟ್ಟಬೇಕೆಂದು.. ಮುಗಿಲೆತ್ತರದ ಕನಸು ನನ್ನದು ಆದರೆ ನನಸಾಗುವುದೋ ತಿಳಿಯದು. ಗೊತ್ತಿಲ್ಲ ಏನಾಗುತ್ತದೆ ಎಂದು ಆದರೆ ಪಯಣ ಬೆಳೆಸಿದೆಇಂದು ನನ್ನ ಹುಟ್ಟೂರಿಗೆ. ನನ್ನ ಶಿವನ ದುರ್ಗಕ್ಕೆ
ಬಸ್ಸು ಶಿವನ ದುರ್ಗದ ಬಳಿ ನಿಲ್ಲಿತು. ಬಸ್ಸಿನಿಂದ ಇಳಿದ ನಾನು ಸುತ್ತಲೆಲ್ಲ ಅಪ್ಪನನ್ನು ಹುಡುಕುತ್ತಿದೆ. ಬರುವ ನಾಲ್ಕು ವಾರಗಳ ಮೊದಲೇ ಅಪ್ಪನಿಗೆ ಪತ್ರದ ಮೂಲಕ ತಿಳಿಸಿದೆ ಆದರೂ ಇಷ್ಟರತನಕ ಅಪ್ಪ ಯಾಕೆ ಬರಲಿಲ್ಲ ಎನ್ನುವುದು ನನ್ನ ಪ್ರಶ್ನೆಯಾಗಿತ್ತು. ಇನ್ನು ಸಮಯ ವ್ಯರ್ಥ ಮಾಡುವುದು ಬೇಡ. ಎಂದುಕೊಂಡು ಮನೆಗೆ ನಡೆದೆ.... ಕಾಡಿನ ಮೂಲಕ ನಡೆದು ಹೋದರು ಯಾವುದೇ ಪ್ರಾಣಿಗಳ ಸ್ವರ ವಾಗಲಿ ಕೇಳಲಿಲ್ಲ.... ಆಗಲೇ ಎದುರು ಯಾರೋ ಬರುತ್ತಿರುವಂತಹ ಅನುಭವವಾಯಿತು. ಯಾರು ಎಂದು ಅವರ ಕಡೆ ದೃಷ್ಟಿ ಹಾಕಿದೆ. ಅರೇ! ಅವನು ನಮ್ಮ ಅಪ್ಪನ ಬಲಗೈ ಬಂಟ ಬೀರ. ಚಿಕ್ಕವನಿದ್ದಾಗಿನಿಂದಲೂ ನಮ್ಮ ಜೊತೆ ಬೆಳೆದವನು. ಎಂದು ಖುಷಿಯಿಂದ ಅವನ ಬಳಿ ಹೋದೆ ಆ ಪುಣ್ಯಾತ್ಮ ಯಾವುದರ ಪರಿವೆಯೇ ಇಲ್ಲದೆ
ಯಾರೇ ಕೂಗಾಡಲಿ
ಊರೇ ಹೋರಾಡಲಿ ನನ್ನ ನೆಮ್ಮದಿಗೆ ಭಂಗವಿಲ್ಲ.
ಎಮ್ಮೆ ನಿನಗೆ ಸಾಟಿ ಇಲ್ಲ ಎಂದು ಸ್ವರದ ಮಹಲನ್ನೇ ಹರಿಸಿದ.
ನಾನು ನಗುತ್ತಾ ಹೇಗಿದ್ದೀಯ ಬೀರ ಎಂದು ಕೇಳಿದೆ. ಅವನು ನನ್ನನ್ನು ಫೋಟೋದಲ್ಲಿ ನೋಡಿದ ಕಾರಣದಿಂದ ಸುಲಭವಾಗಿ ಗುರು ತಿಳಿದ ನಾನು ಚಲೋ ಇದ್ದೀನಿ ನಂದಿನಿ ಅಮ್ಮ
ನೀವು ಹೇಗಿದ್ದೀರಾ,,? ಎಂದು ಪ್ರಶ್ನಿಸಿದ. ನಾನು ಚಲೋ ಇದ್ದೀನಿ ಬೀರ.. ಅಪ್ಪಯ್ಯ ನನ್ನ ಕರಕೊಂಡು ಹೋಗಕ್ಕೆ ಯಾಕೆ ಬಂದಿಲ್ಲ ಎಂದು ಕೇಳಿದೆ..
ಅದು ನಂದಿನಿ ಅಮ್ಮೋರೆ ಎಂದು ಮಾತು ನಿಲ್ಲಿಸಿದ
.
ಏನಾಯ್ತು ಬೀರ ಸರಿಯಾಗಿ ಹೇಳು ಎಂದು ಹೇಳಿದೆ.....
ಅದು ನಂದಿನಿ ಅಮ್ಮೋರೆ ಅಪ್ಪಯ್ಯ. ಎಂದು ಪುನಹ ಮಾತನ್ನು ತುಂಡರಿಸಿದ. ನನಗೆ ಕಾಯುವ ತಾಳ್ಮೆ ಇರಲಿಲ್ಲ... ನೇರವಾಗಿ ಮನೆಯ ಕಡೆಗೆ ಓಡಿದೆ... ಊರಿನವರು ನನ್ನ ನೋಡಿದರು ನೋಡದಂತೆ ಕುಳಿತಿದ್ದರು ,.....
ಮಾತನಾಡಲು ಅವರ ಪದ್ಧತಿ ಅಡ್ಡ ಬರುತ್ತಿತ್ತು ಅಲ್ಲವ ಅದಕ್ಕೆ.
ಅವರನಾರನ್ನು ಗಮನಿಸದೆ ಮನೆಯ ಕಡೆ ಹೆಜ್ಜೆ ಹಾಕಿದೆ ಮನೆಯಲ್ಲಿ ನಿಶಬ್ದದ ವಾತಾವರಣವಿತ್ತು. ಒಳಗೆ ಹೋದರೆ ಅಮ್ಮ ಕಂಗಾಲಾಗಿ ಮಲಗಿದ್ದರು ಅಪ್ಪನನ್ನು ಮನೆಯ ತುಂಬೆಲ್ಲ ಹುಡುಕಿದೆ ಆದರೆ ಸಿಗಲಿಲ್ಲ.....
ಅಮ್ಮನೆ ಬಳಿಬಂದು ಅಪ್ಪ ಎಲ್ಲಿ ಎಂದು ಕೇಳಿದೆ... ಅವರು ಮೌನವಾಗಿ ಕುಳಿತಿದ್ದರು. ನಂತರ ಬಂದ ಬೀರ ನಂದಿನಿ ಅಮ್ಮೋರೆ ಅಪ್ಪೋರು ತೀರಿ ಎರಡು ತಿಂಗಳಾಯಿತು. ಆವಾಗಿನಿಂದ ಅಮ್ಮೋರು ಹೀಗೆ ಇದ್ದಾರೆ... ಎಂಬ ಅವನ ಮಾತು ಕೇಳಿ ಕುಸಿದುಬಿದ್ದೆ ಗೋಳಾಡಿದೆ ಕಿರುಚಾಡಿದೆ ಆದರೆ ಹೋದ ಜೀವ ಬರುವುದುಂಟೇ....
ಅಪ್ಪನನ್ನು ನೋಡುವ ಕನಸಿನಲ್ಲಿ ಕನಸಾಗಿಯೇ ಉಳಿದುಹೋಯಿತು. ಅಪ್ಪನ ಸಾವಿಗೆ ಕಾರಣವನ್ನು ಕೇಳಿದೆ ಅದಕ್ಕೆ ಬಿರ ನೀಡಿದ ಉತ್ತರ ಅಕ್ಕೋರೆ ಅಪ್ಪೋರು ಒಂದು ಸಲ ಕಾಡಿಗೆ ಹೋಗಿದ್ದರು. ಅದು ಯಾವುದು ಬೇರೆ ಕಾಡಿನಿಂದ ತಪ್ಪಿಸಿಕೊಂಡು ಬಂದ ಚಿರತೆ ಅಪ್ಪನ ಮೇಲೆ ಎಗರಿ ಅವರನ್ನು ಕೊಂದು ಹಾಕಿತು.. ಇನ್ನ ಬಳಿಯು ಕೋವಿ ಇರಲಿಲ್ಲ ಕಾಪಾಡಲು ನನ್ನಿಂದಾಗಲಿಲ್ಲ ಕ್ಷಮೆ ಇರಲಿ ಅಕ್ಕೋರೆ ಎಂದು ಹೇಳಿದ...
ಅಪ್ಪನ ಈ ಘೋರ ಸಾವು ಯಾವ ಮನುಜರಿಗೂ ಬರಬಾರದು....
ಮನ ಕಲಕಿತು ಸಾಮಾನ್ಯವಾದ ಸಾವಾದರೆ ಸ್ವಲ್ಪವಾದರೂ ತಡೆದುಕೊಳ್ಳಬಹುದು. ಆದರೆ ಈ ರೀತಿಯಕ್ರೂರ ತಡೆದುಕೊಳ್ಳಲು ಸಾಧ್ಯವಿಲ್ಲ
.
ಕಂಬನಿ ಜಾರಲು ಕಾರಣವೇಕೆ
ಕಂಬನಿಯೇ ಗೆಳತಿ ಯಾದಾಗ
ನನ್ನ ಜಗವೇ ನನ್ನಿಂದ ದೂರವಾದಾಗ
ಕಂಬನಿಯ ಕಣ್ಣೀರಿಗೆ ನಾನೇ ಗೆಳತಿ ಆಗಿರುವಾಗ..
ಒಬ್ಬ ಹೆಣ್ಣಿನ ಜೀವನದಲ್ಲಿ ಅಪ್ಪ ಎಲ್ಲವೂಆಗಿರುತ್ತಾನೆ ಹಾಗೆಯೇ ಅಮ್ಮನು ಕೂಡ
ಕಣ್ಣೀರು ಎಂಬುವುದು ಸಾಗರದ ತರಹ ಹರಿಯುತ್ತಿತ್ತು.. ಸ್ವಲ್ಪ ದಿನಗಳಾಯಿತು.. ಆಗಲೇ ಇನ್ನೊಂದು ಶಾಕ್. ಅಮ್ಮನ ಊಹಿಸಲಾಗದ ಸಾವು ಗೊತ್ತಿಲ್ಲ ಯಾವ ತಪ್ಪು ಮಾಡಿದ್ದೀನಿ ನಾನು ಎಂದು. ಎಲ್ಲರೂ ನನ್ನಿಂದ ದೂರವಾಗಿದ್ದರು . ಹಳ್ಳಿಯ ಜನ ಮೊದಲಿನಿಂದಲೇ ನನ್ನನ್ನು ದ್ವೇಷಿಸುತ್ತಿದ್ದರು ಹಾಗಾಗಿ ಕೊನೆಯ ಕ್ಷಣ ಕೂಡ ಅಮ್ಮನನ್ನು ನೋಡಲು ಯಾರೂ ಬರಲಿಲ್ಲ ನಾನು ಮತ್ತು ಬೀರ ಸೇರಿ ವಿಧಿವಿಧಾನ ಮುಗಿಸಿದೆವು. ಎರಡು ಕಣ್ಣುಗಳನ್ನು ಕಳೆದುಕೊಂಡಂತಹ ಅನುಭವ ಕುರುಡಿಯಾದಂತಹ ಅನುಭವ.. ಆದರೆ ಎಲ್ಲವನ್ನು ಎದುರಿಸುವ ಮನೋಧೈರ್ಯ ನನಗಿತ್ತು.. ಹೀಗೆಯೇ ಶಿವನ ದುರ್ಗದಲ್ಲಿಯೇ ನನ್ನ ಫ್ಯಾಶನ್ ಡಿಸೈನಿಂಗ್ ಕನಸನ್ನು ತ್ಯಜಿಸಿ.. ಬಾಳುವೆ ನಡೆಸಿದೆ..ಬೀರ ತಮ್ಮನಂತೆ ನನಗೆ ಜೊತೆಯಾಗಿದ್ದ. ಹೀಗೆ ಒಂದು ದಿನ ಕಟ್ಟಿಗೆ ತರಲು ಕಾಡಿಗೆ ಹೋಗಿದ್ದೆ.. ಬೀರನು ಕೂಡ ಜೊತೆಗೆ ಬಂದಿದ್ದ. ಕಟ್ಟಿಗೆಯ ಕಟ್ಟು ಕಟ್ಟಿ ಇನ್ನೇನು ಹೊರಡಬೇಕು ಅನ್ನುವಷ್ಟರಲ್ಲಿ ಕಾಪಾಡಿ ಕಾಪಾಡಿ ಎಂದು ಅರಚುವ ಧ್ವನಿ.. ತಿರುಗಿ ನೋಡಿದೆ ಯಾರೋ ಒಬ್ಬ ಯುವಕ ಓಡಿ ಬರುತ್ತಿದ್ದ.. ಚಿರತೆಯು ಅವನ ಬೆನ್ನು ಬಿದ್ದಿತ್ತು... ಇನ್ನೂ ತಡ ಮಾಡೋದು ನನಗೆ ಇಷ್ಟವಾಗಲಿಲ್ಲ. ಬೀರನಿಗೆ ಕೋವಿಯಿಂದ ಗುಂಡು ಹಾರಿಸಿ ಎಂದು ಹೇಳಿದೆ. ಆದರೆ ಆ ಪುಣ್ಯಾತ್ಮನಿಗೆ ಗುಂಡು ಹಾರಿಸಲು ಬಂದರೆ ತಾನೇ. ತಡಮಾಡದೆ ಅವನ ಕೈಯಿಂದ ಕೋವಿಯನ್ನು ತೆಗೆದುಕೊಂಡು ಗುರಿಯಿಟ್ಟು ಚಿರತೆಗೆ ಹೊಡೆದೆ. ಮೊದಲೇ ಅಪ್ಪನ ಜೊತೆ ಬೇಟೆಗೆ ಹೋಗಿದ್ದರಿಂದ ಗುಂಡು ಹಾಡಿಸುವುದು ಸ್ವಲ್ಪ ಮಟ್ಟಿಗೆ ಗೊತ್ತಿತ್ತು. ಆ ಶಿವನ ಕೃಪೆಯು ಎಂಬಂತೆ ಗುಂಡು ನೇರವಾಗಿ ಚಿರತೆಯ ಕಣ್ಣಿಗೆ ಬಿದ್ದಿತ್ತು ಹಾಗೆಯೇ ಒಂದೆರಡು ಗುಂಡುಗಳನ್ನು ಹಾಕಿದೆ ಚಿರತೆ ಯು ಸತ್ತುಹೋಯಿತು . ಬದುಕಿದೆಯಾ ಬಡಜೀವ ಎಂದು ಆ ಯುವಕ ನನ್ನ ಬಳಿ ಬಂದ ಅವನನ್ನು ನೋಡಿ ನನಗೆ ಫುಲ್ ಶಾಕ್ .ಯಾಕಂದ್ರೆ ಅವನು ನನ್ನ ಕ್ಲಾಸ್ ಮೆಂಟ್ ಮನ್ವಿತ್ ಅಂತಅವನನ್ನು ನೋಡಿ ತುಂಬಾ ಖುಷಿಯಾಯಿತು. ಅವನು ಕೂಡ ನನ್ನನ್ನು ನೋಡಿ ಆಶ್ಚರ್ಯದಿಂದ ನಮಸ್ತೆ ನಂದಿನಿಯವರೆ ನೀವೇನು ಇಲ್ಲಿ ಇದು ನಿಮ್ಮ ಊರ ಎಂದು ಕೇಳಿದ. ನಾನು ಅದಕ್ಕೆ ಹೌದೆಂಬಂತೆ ತಲೆ ಅಲ್ಲಾಡಿಸಿದೆ. ಅಲ್ಲ ನಂದಿನಿ ಕಾಲೇಜಿನಲ್ಲಿ ಎಲ್ಲ ಪಾಪಚ್ಚಿ ಕಡುಪಾಪ ತರ ಇರ್ತೀಯಲ್ಲ ಈಗ ನೋಡಿದ್ರೆ ವೀರಾಗ್ರಣಿಗಳತರ ಚಿರತೆಗಳನ್ನು ಬೇಟೆಯಾಡುತ್ತೀಯಲ್ಲ ನಿಮಗೆ ಸ್ವಲ್ಪ ಕೂಡ ಭಯ ಆಗೋದಿಲ್ವಾ? ಎಂದು ಪ್ರಶ್ನಿಸಿದ.
ನಾನು ನಗುತ್ತಾ ಜೀವನದಲ್ಲಿ ಒಂದು ಬಾರಿ ಸೋತ ನಂತರ ಯಾರ ಮೇಲೂ ಭಯವಿರುವುದಿಲ್ಲ. ನಮಗೆ ಮುಖ್ಯವಾದವರನ್ನು ಕಳೆದುಕೊಂಡಾಗ ಜೀವನದ ಮೇಲೆ ಆಸಕ್ತಿಯೇ ಇಲ್ಲದಾಗ... ಸಾವೇ ಎದುರು ನಿಂತರು ನಗುನಗುತ್ತಾ ಸ್ವಾಗತಿಸುವೆ. ಸೋಲೆಂಬ ಬೇಟೆಗಾರನಿಗೆಸಾಯುವುದರ ಮೇಲೆ ಯಾವುದೇ ರೀತಿಯ ಭಯವಿಲ್ಲ.. ನನಗೆ ಸೋಲು ಒಂದೇ ಸಾವು ಒಂದೇ
ಎರಡು ನನ್ನ ಜೀವದ ಗೆಳೆಯರೇ....
ಎಂಬ ನನ್ನ ವಿಚಿತ್ರವಾದ ಉತ್ತರಕ್ಕೆ... ಕಣ್ಣು ಮಿಟಿಕಿಸುತ್ತ ಬೀರನ ಕಡೆ ನೋಡಿದ ಅವನು ನಡೆದ ಕಥೆಯನ್ನೆಲ್ಲ ಹೇಳಿದ. ಆದರೆನನ್ನ ಗಮನ ಮಾತ್ರ ಸತ್ತ ಚಿರತೆಯ ಬಳಿ ಇರುವ ಅದರ ಮುಗ್ಧ ಕಂದಮ್ಮನ ಕಡೆಗಿತ್ತು
...
ಚಿರತೆಯ ಬಳಿ ಓಡಿದೆ ಅದು ಅದಾಗಲೇ ಕೊನೆಯುಸಿರೆಳೆದಿತ್ತು. ತಪ್ಪು ಮಾಡಿದೆ ಎಂದು ಜೋರಾಗಿ ಅತ್ತೆ... ನನಗೆ ನಿಜವಾಗಿಯೂ ಗೊತ್ತಿರಲಿಲ್ಲ ಅದಕ್ಕೆ ಒಂದುಮರಿ ಇದೆಯೆಂದು,.. ಕಣ್ಣೀರು ಧಾರಾಕಾರವಾಗಿ ಸುರಿಯುತ್ತಿತ್ತು.. ಮಗುವಿನ ತಾಯಿಯನ್ನು ನಾನೇ ಕೊಂದೆ ಎಂದು ಪಶ್ಚಾತಾಪ ಪಡುತ್ತಿತ್ತು ಮನ..... ಆ ಮರಿ ತಾಯಿಯನ್ನು ನೆಕ್ಕುತ್ತಾ ಅಳತೊಡಗಿತು. ಅವಾಗಲೇ ಅರಿತುಕೊಂಡೆ ಪ್ರಪಂಚದಲ್ಲಿ ಯಾರಿಗೂ ಯಾರನ್ನು ಕೊಳ್ಳುವ ಹಕ್ಕು ಇಲ್ಲ ಎಂದು... ಏನು ಮಾಡುವುದು ಪಾಪ ( ತಪ್ಪು)ಮಾಡಿಯಾಗಿತ್ತು..... ಬೇಟೆಯಾಡುವುದು ಚಿರತೆಯ ಧರ್ಮ ಅದನ್ನು ತಡಿಯಲು ನಾನಾರು ಎಂದು ಜೋರಾಗಿ ಅತ್ತೆ. ಬೀರಮತ್ತು ಮನ್ವಿತ್ ನನ್ನ ಜೊತೆಗೆ ಇದ್ದರು... ಬೀರ ನಿಗೆ ಗುಂಡಿ ತೋಡಿ ಚಿರತೆಯನ್ನು ಸಮಾಧಿ ಮಾಡು ಎಂದು ಹೇಳಿದೆ. ಬೀರ ಹಾಗೆಯೇ ಮಾಡಿದ. ಕಡೆಯ ಬಾರಿ ಆ ಪುಟ್ಟ ಮಗು ತನ್ನ ತಾಯಿಯ ದರ್ಶನ ಮಾಡಿದ್ದು.... ಅವಾಗಲೇ ಆ ಸತ್ತ ಚಿರತೆಗೆ ಪ್ರಾಮಿಸ್ ಮಾಡಿದೆ ಆ ಪುಟ್ಟ ಮರಿಗೆ ತಾಯಿ ಇಲ್ಲದಿರಬಹುದು ಆದರೆ ತಾಯಿಯ ರೀತಿ ನಾನು ಪ್ರೀತಿ ಕೊಡುತ್ತೇನೆ.. ನಿನ್ನ ಅಷ್ಟರ ಮಟ್ಟಿಗೆ ಅದನ್ನುಪ್ರೀತಿಸಲು ನನಗೆ ಸಾಧ್ಯವಿಲ್ಲ ಆದರೆ ಕೊನೆಯವರೆಗೂ ಅದನ್ನು ನನ್ನ ಮಗುವಿನಂತೆ ನೋಡಿಕೊಳ್ಳುವೆ ಎಂದು ವಚನ ಕೊಟ್ಟೆ. ಮನ್ವಿತ್ ನಿಗೆ ಇದು ಸ್ವಲ್ಪ ವಿಚಿತ್ರವೆನಿಸಿತು. ಅಲ್ಲ ನಂದಿನಿಯವರೇ ನಾನು ಬೆಕ್ಕು ನಾಯಿಗಳನ್ನು ಸಾಕುವುದು ನೋಡಿದ್ದೇನೆ. ಆದರೆ ನೀವು ಹೋಗಿ ಹೋಗಿ ಚಿರತೆಯ ಮರಿಯನ್ನು ಸಾಕುವಿರಿ ಎಂದು ಹೇಳಿದ್ರಲ್ಲ ನಿಮಗೆ ಭಯ ಆಗುವುದಿಲ್ಲವಾ ಎಂದು ಪ್ರಶ್ನೆಇತ್ತ.
ಖಂಡಿತ ಇಲ್ಲ ನಾವು ಯಾವುದಾದರೂ ಪ್ರಾಣಿಗಳಿಗೆ ಪ್ರೀತಿ ಕೊಟ್ಟರೆ ಅದು ಎಂದು ನಮಗೆ ದ್ರೋಹ ಮಾಡುವುದಿಲ್ಲ. ಬೇಕಾದರೆ ಮನುಷ್ಯ ಮಾಡಬಹುದು ಆದರೆ ಪ್ರಾಣಿಗಳಲ್ಲ ಎಂದು ಹೇಳಿ ಆ ಚಿರತೆಯ ಮರಿಯನ್ನು ಕರೆದುಕೊಂಡು ಮನೆಯಲ್ಲಿ ಸಾಕಿದೆ
. ಹೀಗೆ ಒಂದು ದಿನ ಮನ್ವಿತ್ ನೀವು ಯಾಕೆ ಈ ಕಾಡಿಗೆ ಬಂದದ್ದು ಎಂದು ಕೇಳಿದೆ, ಅದು ಬರುವಾಗ ಕಾರು ಕೆಟ್ಟು ಹೋಗಿತ್ತು ಹಾಗಾಗಿ ಇಲ್ಲೆಲ್ಲಾದರೂ ಮನೆ ಇದೆಯಾ ಎಂದು ಹುಡುಕಿಕೊಂಡು ಬಂದೆ. ಆಗ ಈ ಚಿರತೆ ಬೆನ್ನು ಹತ್ತಿತ್ತು ಎಂದು ಹೇಳಿದ. ಈಗ ಹೇಗಿದೆ ನಿನ್ನ ಜೀವನ ಎಂದು ಕೇಳಿದೆ.. ನಾನು ಈಗ ನನಗೆ ಸ್ವಂತ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ನೀನು ಫ್ಯಾಶನ್ ಡಿಸೈನರ್ ಆಕಬೇಕು ಅಂದುಕೊಂಡಿದ್ದೀಯಲ್ವಾ?? ಏನಾಯ್ತು ಎಂದು ಕೇಳಿದ. ಇಲ್ಲ ಕನಸನ್ನೆಲ್ಲ ಬಿಟ್ಟುಬಿಟ್ಟೆ... ಹಣದ ಅವಶ್ಯಕತೆ ತುಂಬಾ ಇದೆ ಕೂಲಿನಾಲಿ ಮಾಡಿಕೊಂಡು ಬದುಕುತ್ತೇನೆ ಎಂದೆ. ಹೀಗೆ ಮಾತನಾಡುತ್ತಾ ಹಳ್ಳಿಯಲ್ಲಿ ಸುತ್ತಾಡಿದೆವು. ನೋಡಿದವರೆಲ್ಲರೂ ನಮ್ಮ ಬಗ್ಗೆ ತಪ್ಪು ತಿಳಿದುಕೊಂಡು.... ಏನೇ ಇನ್ನು ಊರಿನ ಮರ್ಯಾದೆಯನ್ನು ಹಾಳು ಮಾಡಬೇಕು ಎಂದು ಕೊಂಡಿದ್ದೀಯಾ? ಮೊದಲೇ ನಿಮ್ಮ ತಂದೆಯವರು ನಮ್ಮ ಮಾತು ಕೇಳದೆ ನಿನ್ನನು ಓದಲು ಕಳುಹಿಸಿದರು.. ಇನ್ನು ನಾವು ಸುಮ್ಮನಿರಲ್ಲ ಎಂದುಕೊಂಡು ನಮ್ಮಿಬ್ಬರನ್ನು ಎಳೆದುಕೊಂಡು ಶಿವನ ದೇವಸ್ಥಾನದ ಎಡೆಗೆ ಹೆಜ್ಜೆ ಹಾಕಿದರು ನನಗಂತೂ ಏನು ಅರ್ಥವಾಗಿರಲಿಲ್ಲ.... ಶಿವನ ಮುಂದೆ ಬಂದು ನಂದಿನಿ ನೀನು ಶಿವನ ಪರಮ ಭಕ್ತೆ ಅಲ್ವಾ,, ಈಗ ನೀನು ಮಾಡಿದ ಪಾಪಕ್ಕೆ ಇಲ್ಲಿ ಪ್ರಾಯಸ್ಚಿತ ಆಗಬೇಕು ಎಂದು...... ಬಲವಂತವಾಗಿ ಮನ್ವಿತ್ ಗೆ ನನ್ನನು ಮದುವೆಯಾಗುವಂತೆ ಒಪ್ಪಿಸಿದರು. ನನಗಂತೂ ಏನು ಅರ್ಥವಾಗಿರಲಿಲ್ಲ.... ಅರ್ಥವಾಗುವುದಕ್ಕೆ ಮೊದಲೇ ಮಂಗಳಸೂತ್ರ ನನ್ನ ಕೊರಳಲ್ಲಿತ್ತು. ಅಕ್ಷತೆ ಕಾಳು ಬಿದ್ದಿತ್ತು . ಮನ್ವಿತ್ನ ಮುಖವನ್ನೊಮ್ಮೆ ನೋಡಿದೆ ಅವನು ಏನು ಆಗಲಿಲ್ಲ ಎಂಬುವಂತೆ ಖುಷಿಯಿಂದಿದ್ದ. ನನಗೆ ಸ್ವಲ್ಪ ವಿಚಿತ್ರ ಅನ್ನಿಸಿತು. ಆದರೆ ನನ್ನಲ್ಲಿರುವ ಪ್ರಶ್ನೆ ಇನ್ನೂ ಬಾಕಿಇತ್ತು. ಪ್ರಶ್ನೆ ಕೇಳುವ ಹಕ್ಕು ನನ್ನಲ್ಲಿತ್ತು. ಅಲ್ಲ ಒಂದು ಹುಡುಗ ಹುಡುಗಿ ಮಾತನಾಡುತ್ತಿದ್ದರೆ ಅವರು ಪ್ರೇಮಿಗಳು ಎನ್ನುವುದೇ ಅರ್ಥವಾ,, ಅವರು ಗೆಳೆಯ ಗೆಳತಿ ಆಗಿರಬಹುದು ಅಥವಾ ಅಣ್ಣ-ತಂಗಿಯೇ ಆಗಿರಬಹುದು ಯಾವಾಗಲೂ ಒಂದೇ ರೀತಿ ಕಲ್ಪಿಸಿಕೊಳ್ಳುವುದು ಅದು ನಿಮ್ಮ ಮೂರ್ಖತನ ವಾಗಿರುತ್ತದೆ... ಹಾಗೆಯೇ ನಿಮ್ಮ ಬಾಲ್ಯವಿವಾಹ ಪದ್ಧತಿ. ಏನು ಗೊತ್ತಿಲ್ಲದ ಪುಟ್ಟ ಪುಟ್ಟ ಮಕ್ಕಳನ್ನು ತೊಟ್ಟಿಗಳಲ್ಲಿ ಮದುವೆ ಮಾಡಿಕೊಟ್ಟಿರುವ ಸಂಪ್ರದಾಯದವರು ಇದ್ದಾರೆ.. ಇದೆಲ್ಲ ಯಾಕೆ? ಅವರಿಗೆ ವಿದ್ಯೆಯನ್ನು ನೀಡಿ ವಿದ್ಯಾವಂತರನ್ನಾಗಿ ಮಾಡಿ ಹೆಣ್ಣುಮಕ್ಕಳಿಗೆ ಅಡುಗೆ ಮನೆಯೊಂದೇ ಸ್ಥಳವಲ್ಲ ಇತ್ತೀಚೆಗೆ ನೋಡಿ ಪ್ರತಿಯೊಂದು ಹೆಣ್ಣು ಮಗುವೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ.. ಅದನ್ನು ಬಿಟ್ಟು ಬಾಲ್ಯವಿವಾಹ ಸತಿಸಹಗಮನ ಪದ್ಧತಿ ಮುಂತಾದ ಪದ್ಧತಿಗಳನ್ನು ತ್ಯಜಿಸಿ.. ಇದು ಒಬ್ಬ ಹೆಣ್ಣಿಗೆ ನೀಡುವಂತಹ ಕಠೋರವಾದ ಶಿಕ್ಷೆ ಯಾಗಿರುತ್ತದೆ. ಎಂದು ಅವರಿಗೆಲ್ಲಾ ತಿಳಿಸಿ ಹೇಳಿದೆ. ಹಳ್ಳಿಯ ಹೆಣ್ಣುಮಕ್ಕಳು ಅದಕ್ಕೆ ಹೌದೆಂದು ಸಮ್ಮತಿಸಿದರು..... ಆದರೆ ನಾನು ಈ ಮಾತನ್ನು ನನ್ನ ಕೊರಳಿಗೆ ತಾಳಿ ಹೇಳುವುದಕ್ಕಿಂತ ಮೊದಲೇ ಹೇಳಿದ್ದರೆ ಹೀಗೆ ಆಗುತ್ತಿರಲಿಲ್ಲ ಎಂದು ಅನಿಸಿತು.
ಆದರೆ ಒಂದು ಖುಷಿ ನನ್ನ ಹಳ್ಳಿಯವರು ಎಲ್ಲರು
ಬದಲಾದರಲ್ಲ ಎನ್ನುವ ಖುಷಿ. ಪಾಪ ನಮ್ಮ ಬೀರ ಓಡಿಕೊಂಡು ಬಂದ ಅವರ ಜೊತೆ ನನ್ನ ಮಗ ಚಿರತೆ ಪಾಪು ಮರಿ ಕೂಡ ಬಂದಿತ್ತು. ಬೀರ ಬಂದವನೇ ನನ್ನನ್ನು ನೋಡಿ ಶಾಕ್ ಆದ ಏನು ಅಕ್ಕೋರೆ ನಿಮ್ಮದು ಮದುವೆಯಾಗಿ ಬಿಟ್ಟಿತಾ ಎಂದು ಕೇಳಿದ. ನಾನು ಹೌದೆಂಬಂತೆ ತಲೆ ಅಲ್ಲಾಡಿಸಿದೆ.... ಬೀರ ಮತ್ತು ಚಿರತೆ ಪಾಪು ಮರಿಯನ್ನು ಬಿಟ್ಟು ಮನ್ವಿತ್ ನ ಜೊತೆ
ಅವರ ಮನೆಗೆ ತೆರಳಿದೆ.. ಗೊತ್ತಿಲ್ಲ ನನಗೆ ಅಂದೇಕೋ ಮನಸಿನಲ್ಲಿ ತಳಮಳ ಮೂಡಿತ್ತು. ಮೊದಲೇ ಮನ್ವಿತ್ನ ತಾಯಿ ಆಸ್ತಿ ಪಾಸ್ತಿ ದುಡ್ಡಿದ್ರೆ ದುನಿಯಾ ಆಳಬಹುದು ಎನ್ನುವ ಸ್ವಭಾವದವರು. ನನ್ನನ್ನು ಒಪ್ಪಿಕೊಳ್ಳುತ್ತಾರೋ ಇಲ್ಲವೋ ಎನ್ನುವ ತಳಮಳ ಮನ್ವಿತ್ನ ಮುಖವನ್ನೊಮ್ಮೆ ನೋಡಿದೆ ಅವನು ನಗು ನಗುತ್ತಲೇ ಇದ್ದ. ಅಲ್ಲ ಈಗ ನಗುವಂತಹದ್ದು ಏನಾಯಿತು ಎಂದು ಕೇಳಿದೆ. ಅದಕ್ಕೆ ಅವನ ಉತ್ತರ ನಿಮ್ಮ ಊರಿನ ಜನ ಎಷ್ಟು ಒಳ್ಳೆಯವರು ನಂದಿನಿಯವರೇ.. ನಾನು ನಿಮ್ಮನ್ನು ಕಾಲೇಜ್ ಡೇಸ್ ನಿಂದಳು ಪ್ರೀತಿಸುತ್ತಿದ್ದೆ. ಆದರೆ ಹೇಳಲು ಸ್ವಲ್ಪ ಭಯವಿತ್ತು. ಇಂದು ಬಯಸದೆ ಬಂದ ಭಾಗ್ಯ ಎನ್ನುವಂತೆ ನನ್ನ ಮದುವೆ ನಾನು ಪ್ರೀತಿಸಿದ ಹುಡುಗಿಯ ಜೊತೆಯೇ ನಡೆಯಿತು ಎನ್ನುವಾಗ ಖುಷಿಯಾಗುವುದಿಲ್ಲವೇ ಎಂದು ಹೇಳಿದ.
ನನಗೂ ತುಂಬಾ ಖುಷಿಯಾಗಿತ್ತು. ನನ್ನನ್ನು ಪ್ರೀತಿಸುವವರು ಈ ಜಗದಲ್ಲಿ ಇದ್ದಾರೆ ಎಂದು. ಅಲ್ಲ ಮನ್ವಿತ್ ರವರೆ ನೀವು ಯಾಕೆ ನನಗೆ ಯಾವಾಗಲೂ ನಂದಿನಿಯವರೇ ನಂದಿನಿಯವರೇ ಎಂದು ಗೌರವ ಕೊಟ್ಟು ಕರೆಯುವಿರಿ. ನಂದಿನಿ ಅಂತ ಕರಿ ಬಾರದ ಎಂದು ಕೇಳಿದೆ. ಅದಕ್ಕೆ ಅವರು ನೀಡಿದ ಉತ್ತರ ನನಗೆ ತುಂಬಾ ಇಷ್ಟವಾಯಿತು.... ಯಾವ ಹುಡುಗಿಯಾದರೂ ನಮಗೆ ಎಷ್ಟೇ ಆತ್ಮೀಯರಾಗಿದ್ದರು ಸರಿ ಅವರನ್ನು ಏಕವಚನದಿಂದ ಕರೆಯುವುದು ತಪ್ಪು.. ಹೆಣ್ಣುಮಕ್ಕಳಿಗೆ ಅವರದೇ ಆದ ಗೌರವವಿದೆ.. ಯಾವಾಗಲೂ ಗೌರವ ಕೊಟ್ಟು ಮಾಡಿಸಬೇಕು ಎನ್ನುವುದು ನನ್ನ ಸಂಸ್ಕೃತಿ ಅಥವ ನನ್ನ ಮನೋಭಾವ ಎಂದನು.
ಮಾತೆ ಬಾರದ ಮೂಕಪ್ರೇಕ್ಷಕರಂತೆ ಆಗಿದ್ದೆ ನಾನು
ಅವಾಗ ಮೌನಕ್ಕೊಂದು ಉಡುಗೊರೆ ಸಿಕ್ಕಂತಾಗಿತ್ತು.
ಹೆಣ್ಣನ್ನು ಕೇವಲವಾಗಿ ನೋಡುವ ಜನರಲ್ಲಿ ನನ್ನವನು ಹೆಣ್ಣಿನ ಮೇಲೆ ಇಟ್ಟಿರುವ ಗೌರವಕ್ಕೆ ಚಿರಸ್ಥಾಯಿಯಾದೆ. ಹಾಗೋ -ಹೀಗೂ ಅವನ ಮನೆ ತಲುಪಿತು,......,., ಮನೆಯ ಹೊಸ್ತಿಲಿಗೆ ಆಗಮಿಸುವಾಗಲೇ ಅವರ ತಾಯಿ ಬಂದು ಯಾರಿವಳು ಎಂದು ಕೇಳಿದರು. ಮನ್ವಿತ್ ನಡೆದ ವಿಷಯವನ್ನೆಲ್ಲ ಹೇಳಿದ ಅವನ ತಾಯಿ ಅವೆಲ್ಲವನ್ನು ಕೇಳದೆ ಅವರು ವರದಕ್ಷಿಣೆ ಎಷ್ಟು ಕೊಟ್ಟರು ಎಂದು ಕೇಳಿಬಿಟ್ಟರು. ನಾನಂತೂ ಮೂಕವಿಸ್ಮಿತಲಾದೆ ಮನ್ವಿತ್ ವರದಕ್ಷಿಣೆ ತೆಗೆದುಕೊಳ್ಳುವುದು ಅಪರಾಧ ಎಂದು ಹೇಳಿದ ನನ್ನವನ ತಾಯಿಗೆ ಕೆಂಡದಂತ ಕೋಪ ಬಂತು. ಅಲ್ಲ ಮನ್ವಿತ್ ನಮಗೆ ನಮ್ಮದೇ ಆದ ಸ್ವಂತ ಕಂಪನಿ ಇದೆ.. ಇಷ್ಟು ದೊಡ್ಡ ಮನೆತನದವರು ನಾವು.. ಈ ಮನೆಗೆ ಸೊಸೆಯಾಗಿ ಬರುವುದಕ್ಕೂ ಪುಣ್ಯ ಮಾಡಿರಬೇಕು.. ಹೋಗಿ ಹೋಗಿ ಹಳ್ಳಿ ಗುಗ್ಗುಳನ್ನೆಲ್ಲ ಮದುವೆಯಾಗಿ ಬಂದಿದ್ದೀಯಲ್ಲ ನಿನಗೇನು ಹುಚ್ಚಾ. ಈ ಮನೆಗೆ ಸೊಸೆಯಾಗಿ ಬರುವುದಕ್ಕೆ ಎಷ್ಟೆಷ್ಟು ಹುಡುಗಿಯರು ಕಾಯುತ್ತಾ ಕುಳಿತಿದ್ದಾರೆ ಹೋಗಿ ಹೋಗಿ ಇಂತಹ ಹುಡುಗಿಯನ್ನು ಕರೆದುಕೊಂಡು ಬಂದಿದ್ದೀಯಲ್ಲ ನಿನಗೇನು ಹುಚ್ಚಾ ಎಂದು ರೇಗಿದರು. ಮನ್ವಿತನಿಗೆ
ಅವನ ತಾಯಿಯನ್ನು ಸಮಾಧಾನಿಸುವುದೂ ಹೇಗೆಂದು ತಿಳಿಯಲಿಲ್ಲ ಅವನ ಅಣ್ಣ ಕೂಡ ತಾಯಿ ಹೇಳಿದಂತೆ ಶ್ರೀಮಂತರ ಹುಡುಗಿಯನ್ನು ಮದುವೆಯಾಗಿ ಸೆಟಲ್ ಆಗಿದ್ದ.. ಹಾಗಾಗಿ ಯಾರೂ ಅವನ ಮಾತು ಕೇಳಿಲ್ಲ ಯಾರು ಅವನ ಭಾವನೆಗಳಿಗೆ ಸ್ಪಂದಿಸಲಿಲ್ಲ. ಕೊನೆಗೆ ಅವನಲ್ಲಿ ಇದ್ದದ್ದು ಎರಡೇ ಆಯ್ಕೆ ಅಮ್ಮ ಮತ್ತು ಹೆಂಡತಿ ಇವರಲ್ಲಿ ಯಾರನ್ನಾದರೂ ಒಬ್ಬರನ್ನ ಆಯ್ಕೆ ಮಾಡಿಕೊಳ್ಳಬೇಕು..
ಮನ್ವಿತ್ ಅಂತು ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಇದ್ದ..... ಒಂದು ಕಡೆ ಜನ್ಮ ಕೊಟ್ಟವಳು .. ಇನ್ನೊಂದು ಕಡೆ ಪ್ರತಿ ಜನ್ಮಕ್ಕೂ ಜೊತೆಯಾಗಿರುವವಳು ತನ್ನ ನಂಬಿ ನನ್ನ ಜೊತೆ ಸಪ್ತಪದಿ ತುಳಿದವಳು ಇಬ್ಬರು ನನಗೆ ಮುಖ್ಯವೇ...... ಆದರೆ ಈಗ ನಾನು ಒಳ್ಳೆಯತನ ದ ಜೊತೆಗೆ ನಿಲ್ಲುವ ಕಾಲಾವಧಿ ಹಾಗಾಗಿ ಅವನು ನನ್ನನ್ನು ಆಯ್ಕೆ ಮಾಡಿಕೊಂಡ . ಅವನ ಹೆಸರಲ್ಲಿದ್ದ ಕಂಪನಿಯನ್ನು ಅಮ್ಮನಿಗೆ ಬಿಟ್ಟುಕೊಟ್ಟು ಮತ್ತೆ ಶಿವನ ದುರ್ಗಕ್ಕೆ ಹಿಂದಿರುಗಿದೆವು ಅವನು ಹೇಳಿದ್ದು ಒಂದೇ ಕೈಹಿಡಿದು ಬಂದಿರುವವರನ್ನು ಯಾವತ್ತು ಬಿಟ್ಟು ಕೊಡುವುದಿಲ್ಲ ಸಾವಿನಲ್ಲಿ ಕೂಡಾ ನಿನ್ನ ಜೊತೆಯಾಗಿರುತ್ತೇನೆ ಎಂಬ ಅವನ ಮಾತು ನನಗೆ ತುಂಬಾ ಹಿಡಿಸಿತು.. ಹೀಗೆಯೇ ಕಾಲ ಕಳೆಯಿತು ಒಂದು ದಿನ ಇದ್ದಕ್ಕಿದ್ದಂತೆ ಮನ್ವಿತ್ನ ಅಮ್ಮ ನಮ್ಮ ಮನೆಗೆ ಬಂದು ತುಂಬಾ ಖುಷಿಯಾಗಿ ಮಾತಾಡಿ ಈ ಕಾಡನ್ನು ತೋರಿಸುತ್ತೀರಾ ನಮಗಂತೂ ಸಿಟಿಯಲ್ಲಿ ಇದ್ದು ಅಭ್ಯಾಸ ಕಾಡು ಹೇಗಿದೆ ಎಂದು ಗೊತ್ತಿಲ್ಲ ನಂದಿನಿ ಮನ್ವಿತ್ ಈ ಊರನ್ನು ತೋರಿಸುತ್ತೀರಾ ಎಂದರು. ಮನ್ವಿತ್ ಮತ್ತು ನಾನು ಅವರ ಜೊತೆ ಕಾಡು ಸುತ್ತಲು ಹೊರಟೆವು ಬೀರ ಮತ್ತು ನನ್ನ ಮುದ್ದು ಚಿರತೆ ರಾಯ ಮನೆಯಲ್ಲಿ ಇದ್ದರು. ಹೀಗೆ ಕಾಡಿನ ಮಧ್ಯ ಭಾಗ ಅಸ್ಟರ ವರೆಗೆ ಖುಷಿಯಾಗಿ ಮಾತನಾಡುತ್ತಿದ್ದ ಮನ್ವಿತ್ನ ಅಮ್ಮನ ಸ್ವರದಲ್ಲಿ ಬದಲಾವಣೆ ಆಗುತ್ತಿರುವುದನ್ನು ಗಮನಿಸಿದೆ ಆಗಲೇ ಅವರ ಅಮ್ಮ ಪಿಸ್ತೂಲ್ ತೆಗೆದು. ಮನ್ವಿತ್ ನೀನು ಮಾಡಿದ ಒಂದೇ ಒಂದು ತಪ್ಪೆಂದರೆ ನನ್ನ ಮಗನಾಗಿ ಹುಟ್ಟಿದ್ದು.... ಹಾಗೆಯೇ ಈ ಹುಡುಗಿಯನ್ನು ಮದುವೆಯಾಗಿ ಇನ್ನೊಂದು ತಪ್ಪು ಮಾಡಿದೆ... ಈ ಸಮಾಜದಲ್ಲಿ ದುಡ್ಡಿದ್ರೆ ಅದಕ್ಕೊಂದು ಸ್ಥಾನ ಅದಕ್ಕೊಂದು ಬೆಲೆ ದುಡ್ಡಿಗಿಂತ ಹೆಚ್ಚು ಮಹತ್ವಬೇರೆ ಯಾವುದಕ್ಕೂ ಇಲ್ಲ. Totally ದುಡ್ಡಿದ್ರೆ ದುನಿಯಾ ನೇ ಆಳಬಹುದು........ ನಿನಗೆ ಅಷ್ಟು ಸಂಬಂಧಗಳು ಬಂದಿದ್ದರು ಈ ಹುಡುಗಿಯನ್ನೇ ಮದುವೆಯಾದೆ.. ನನ್ನನ್ನು ಎದುರು ಹಾಕಿಕೊಂಡವರನ್ನು ಇದುವರೆಗೂ ಬಿಟ್ಟಿಲ್ಲ ಇನ್ನು ಮುಂದೆಯೂ ಬಿಡುವುದಿಲ್ಲ ಸಂಬಂಧಗಳ ಬೇಲಿ ನನಗಿಲ್ಲ ದುಡ್ಡೇ ನನಗೆಲ್ಲ
ಎಂದು ಗುಂಡುಹಾರಿಸುವಾಗಲೇ ಚಿರತೆ ಮರಿ ಅಡ್ಡಕ್ಕೆ ಬಂತು. ಚಿರತೆ ಮರಿಗೆ ಆ ಗುಂಡು ತಗುಲಿತು..... ಆಗಲೇ ಅಲ್ಲಿಗೆ ಬಂದಿದ್ದ ಬೀರ ನನ್ನ ಕೈಗೆ ಕೋವಿಯನ್ನು ಕೊಟ್ಟ ಅದರೆ ನನ್ನ ಕೈ ನಡುಗುತ್ತಿತ್ತು. ಕೊನೆಯ ಬಾರಿ ಹೇಳಿದೆ ಇನ್ನೊಂದ್ಸಲ ಈ ಊರಿಗೆ ನಿಮ್ಮಆಗಮನ ವಾಗಬಾರದು ಇಲ್ಲದಿದ್ದರೆ ನಿಮ್ಮಸಾವು ನಿಶ್ಚಿತ. ಅತ್ತೆ ನಿಮ್ಮನ್ನುಒಂದೇ ಒಂದು ಕಾರಣಕ್ಕೆ ಬಿಡುತ್ತಿದ್ದೇನೆ ಹೊರತು ಯಾವುದೇ ಕನಿಕರದಿಂದ ಲ್ಲ. ಎಂದು ಕೋವಿಯನ್ನು ಕೆಳಗಿಟ್ಟೆ ಆಗಲೇ ಇನ್ನೊಂದು ಗುಂಡು ಹಾರಿತು. ಇವರಿನ್ನೂ ಸುಮ್ಮನಿರುವವರಲ್ಲ. ಹೆತ್ತಮಗನನ್ನೇ ಸಾಯಿಸುವ ಕಟೋರ ಹೃದಯವುಳ್ಳ ಈ ಹೆಣ್ಣು ಬದುಕಬಾರದುಎಂದು ಕೋವಿಯಿಂದ ಗುಂಡು ಹೊಡೆದೆ ಬಿಟ್ಟೆ. ಆಕೆ ಅಲ್ಲೇ ಕುಸಿದು ಬಿದ್ದಳು. ಮನ್ವಿತ್ ಓಡಿಹೋಗಿ ಅಮ್ಮಎಂದು ಅಳತೊಡಗಿದ. ಆದರೆ ಅವನುನನಗೆ ಒಂದು ಮಾತು ಬೈಯಲಿಲ್ಲ.. ಕಾರಣ ಕೇಳಿದರೆ ನಿನ್ನ ಮೇಲೆ ಇರುವ ನಂಬಿಕೆ ಎಂಬ ಉತ್ತರ. ಒಮ್ಮೊಮ್ಮೆ ಅನಿಸುತ್ತಿತ್ತು ಇವನು ನನ್ನ ಪ್ರತಿ ಜನ್ಮದ ಮೈತ್ರಿಯಾಗಿ ದೊರೆತರೆ ಎಷ್ಟು ಚೆನ್ನ. ಎಂದಿತು ಮನ. ತಿರುಗಿ ನೋಡಿದೆ ನನ್ನ ಚಿರತೆ ರಾಯ ಅಂಗಾತವಾಗಿ ಬಿದ್ದಿತ್ತು ಆದರೆ ಜೀವವಿನ್ನೂ ಇತ್ತು. ನನ್ನ ಪ್ರಾಮಿಸ್ ನೆನಪಾಯಿತು... ಆ ಚಿರತೆ ಮರಿಯನ್ನು ಎತ್ತಿಕೊಂಡು ಪ್ರಾಣಿಗಳ ವೈದ್ಯರ ಬಳಿ ಕರೆದುಕೊಂಡು ಹೋದೆ.. ಆ ಶಿವನ ಕೃಪೆಯೋ ಏನೋ ಎಂಬಂತೆ ಚಿರತೆ ಮರಿ ಹುಷಾರ್ ಆಯಿತು.... ಜೀವನದಲ್ಲಿ ಬಂದಂತಹ ಕಂಟಕಗಲೆಲ್ಲ ದೂರವಾಯಿತು. ಕಡೆಗೆ ತಿಳಿದದ್ದು ಒಂದೇ ಒಂದು ವಿಷಯ ನಾವು ಯಾರಿಗೆ ಪ್ರೀತಿಯನ್ನು ಕೊಡುತ್ತೇವೆ ಅವರು ನಮಗೆ ಪ್ರಾಣವನ್ನು ಬೇಕಾದರೂ ನೀಡುತ್ತಾರೆ.. ಅದಕ್ಕೆ ಈ ಕಥೆಯಲ್ಲಿ ಉದಾಹರಣೆ ಯಾದದ್ದು ಪುಟ್ಟ ಚಿರತೆ ಮರಿ... ಋಣಿಯಾಗಿರುವೆ ಪ್ರತಿ ಜನುಮದಲ್ಲು ಅದಕ್ಕೆ. ಯಾವ ಜನ್ಮದ ಮೈತ್ರಿಯೋ ನನಗದು ತಿಳಿದಿಲ್ಲ ಸಂಬಂಧಗಳಿಗೇ ರಕ್ತಸಂಬಂಧಗಳೇ ಆಗಬೇಕೆಂದೇನಿಲ್ಲ..... ಮನಸ್ಸಿನ ಸಂಬಂಧವೂ ಇದೆ... ಈಗ ಜೀವನದಲ್ಲಿ ನಾನು ನನ್ನ ಗಂಡ, ನನ್ನ ಪುಟ್ಟ ಚಿರತೆ ಮರಿ ಪಾಪು, ಹಾಗೆಯೇ ಬೀರ ತುಂಬಾ ಖುಷಿಯಾಗಿದ್ದೇವೆ... ಈಗ ಕಷ್ಟಪಟ್ಟು ನಮ್ಮದೇ ಒಂದು ಕಂಪನಿಯನ್ನು ಕಟ್ಟಿ ನನ್ನ ಕನಸನ್ನು ಈಡೇರಿಸಿಕೊಂಡೆ....
ಕೊನೆಗೆ ಅನಿಸಿದ್ದು ಒಂದೇ
ಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು ನಮ್ಮಿಬ್ಬರನು ಮತ್ತೆ ಬಂಧಿಸಿಹುದೋ ಕಾಣೆ.......
ತಪ್ಪಿದ್ದರೆ ಕ್ಷಮೆ ಇರಲಿ